Thursday, March 21, 2019

ಎಲ್ಲಾ ಕೆಲಸವನ್ನೂ ಒಬ್ಬರೇ ಮಾಡುವುದನ್ನು ರೂಢಿಸಿಕೊಳ್ಳುತ್ತಿದ್ದೇವೆ.
ಇತರರಿಗೆ ತೊಂದರೆ ಕೊಡಬಾರದು ಎಂಬ ಭಾವ ನಮ್ಮೆಲ್ಲರನ್ನೂ ಆವರಿಸಿಕೊಂಡಿದೆ.
ಸಮಸ್ಯೆ ಎಷ್ಟೇ ಸಣ್ಣದಾಗಿರಲೀ ಯಾರನ್ನಾದರೂ ಅವಲಂಬಿಸುವುದು ಕೊನೆಯ ಆಯ್ಕೆ ಎಂಬಂತಾಗಿದೆ.
ಇತರರ ಮುಂದೆ ಕೈಯೊಡ್ಡುವ ಸ್ಥಿತಿ ಬಾರದಿರಲೆಂದು ನಾವು ಗಾಣದೆತ್ತಿನಂತೆ ದುಡಿಯುತ್ತಿದ್ದೇವೆ.
ಮತ್ತೊಬ್ಬರಿಂದ ಲಿಫ್ಟ್ ಕೇಳುವ ಸಂಕೋಚದಿಂದ ಸ್ವಂತಕ್ಕೆ ಗಾಡಿ ಕೊಳ್ಳುವ ಧಾವಂತದಲ್ಲಿದ್ದೇವೆ.
ವೃದ್ಧಾಪ್ಯದಲ್ಲಿ ಮಕ್ಕಳಿಗೆ ಹೊರೆಯಾಗಬಾರದೆಂಬ ಕಾರಣಕ್ಕೆ ಪೋಷಕರು ಬ್ಯಾಂಕ್ ನ Fixed Deposit ಮೊರೆ ಹೋಗುತ್ತಿದ್ದಾರೆ.
ಪೋಷಕರಿಂದ ಖರ್ಚಿಗೆ ಹಣ ಕೇಳುವ ಮುಜುಗರದಿಂದಾಗಿ ಮಕ್ಕಳು ಹಣ ಕೂಡಿಡುತ್ತಿದ್ದಾರೆ.
ಆಪತ್ಕಾಲದಲ್ಲಿ ಹೆಂಡತಿ ಕೂಡಾ ತನ್ನನ್ನು ತೊರೆಯಬಹುದೆಂಬ ಗುಮಾನಿಯಿಂದಾಗಿ ಗಂಡ ರಹಸ್ಯವಾಗಿ ಮತ್ತೊಂದು ಬ್ಯಾಂಕ್ ಅಕೌಂಟ್ ಇಟ್ಟುಕೊಂಡಿದ್ದಾನೆ.
ಬೀದಿಪಾಲಾಗುವ ಸ್ಥಿತಿ ಬಂದರೆ ಏನು ಮಾಡುವುದೆಂಬ ಹೆದರಿಕೆಯಿಂದಾಗಿ ತವರಿನಿಂದ ಸಿಕ್ಕ ಪಾಲನ್ನೆಲ್ಲಾ ಹೆಂಡತಿ ತಾನೇ ಇಟ್ಟುಕೊಂಡಿದ್ದಾಳೆ.
ಮೇಜಿನ ಮೇಲೆ ಮಕ್ಕಳಿಗಾಗಿ ಅನ್ನ ಸಿದ್ಧವಾಗಿರಿಸಿ ಅಮ್ಮ ಬರಿಹೊಟ್ಟೆಯಲ್ಲೇ ಕೆಲಸಕ್ಕೆ ಓಡುತ್ತಿದ್ದಾಳೆ.
ಗಂಡ ಹೆಂಡತಿಯರ ಭೇಟಿ ರಜಾದಿನಗಳಿಗೆ ಮೀಸಲಾಗಿದೆ.
ಹೋಮ್ ನರ್ಸ್ ಗಳು, ಆಯಾಗಳು, ವೃದ್ಧಾಶ್ರಮಗಳು, ಎಲ್ಲವೂ ಪರರಿಂದ ಸಹಾಯ ಕೇಳುವ ನಮ್ಮ ಹಿಂಜರಿಕೆಯ ಫಲಶ್ರುತಿಗಳು.
ಮಕ್ಕಳ ಸಂಖ್ಯೆ ಕಡಿಮೆ ಮಾಡಿದ್ದೂ, ಫುಲ್ ಮೀಲ್ಸ್ ಗೆ ಬದಲಾಗಿ ಅನ್ನ ಸಾಂಬಾರ್ ತಿನ್ನುವುದನ್ನು ರೂಢಿಸಿಕೊಂಡದ್ದೂ ಸ್ವಾವಲಂಬನೆಯ ಉದ್ದೇಶದಿಂದಾಗಿಯೇ.
ಹಾಗೆ ಎಲ್ಲರೂ ಸ್ವಾವಲಂಬಿಗಳಾಗಲು ಕಾತರಿಸುತ್ತಿದ್ದೇವೆ. ಭವಿಷ್ಯದ ಬಗೆಗಿನ ಆತಂಕದಿಂದಾಗಿ ಧಾವಿಸುತ್ತಿದ್ದೇವೆ. ಹೆಚ್ಚು ಹೆಚ್ಚು ನ್ಯೂಕ್ಲಿಯರ್ ಆಗುತ್ತಿದ್ದೇವೆ.
ಕೈ ಒಡ್ಡುವುದನ್ನು, ಕನಿಕರದ ಮಾತುಗಳನ್ನು, ತಿರಸ್ಕಾರದ ನೋಟವನ್ನು ಮೀರುವ ಭೀಕರ ಸಮರದಲ್ಲಿ ತೊಡಗಿದ್ದೇವೆ.
ಸ್ವಾವಲಂಬಿಯಾಗುವ ಹಪಾಹಪಿಯಿಂದಾಗಿ ಹೆಚ್ಚಿನ ಹೊರೆ ಹೊರುವುದಕ್ಕೆ ಸಿದ್ಧರಾಗಿದ್ದೇವೆ. ದ್ವೀಪವಾಗುತ್ತಲೇ ಇದ್ದೇವೆ.

ಕುಸಿದು ಹೋದಾಗ ಯಾರೂ ಇರುವುದಿಲ್ಲ ಎಂಬ ಭಾವವನ್ನು ಗಟ್ಟಿಗೊಳಿಸುತ್ತಾ, ತನ್ನ ಸುತ್ತಣ ಜಗತ್ತನ್ನು ತನ್ನ ಪರಿಚಿತರನ್ನು ಅಪನಂಬಿಕೆಯಿಂದ ನೋಡುತ್ತಿದ್ದೇವೆ.
ಒಂಟಿಯಾಗಿಯೇ ನಗುತ್ತಿದ್ದೇವೆ, ಕಣ್ಣೀರು ಹಾಕುವುದೂ ಕೂಡಾ ಒಂಟಿಯಾಗಿಯೇ. ಒಟ್ಟಿಗೆ ನಗುವುದಕ್ಕೆ, ಮತ್ತೊಬ್ಬರ ತೋಳಿಗೆ ಆತುಕೊಂಡು ಅಳುವುದಕ್ಕೆ ಇಬ್ಬರಿಗೂ ಹಿಂಜರಿಕೆ. ಮತ್ತೊಬ್ಬರಿಗೆ ತೊಂದರೆಯಾಗಬಾರದಲ್ಲವೇ?
ಸವಿಗನಸು ಕಾಣುತ್ತಾ ನಿದ್ರಿಸುವುದಕ್ಕೆ ನಾಳಿನ Assignment ಗಳು ಬಿಡುತ್ತಿಲ್ಲ.
ಯಾರೂ ಮಾತಿಗೆ ಸಿಗುತ್ತಿಲ್ಲ. ನಮ್ಮಂತೆಯೇ ಇತರರೂ ಸ್ವಾವಲಂಬನೆಯ ಓಟದಲ್ಲಿ Busy ಯಾಗಿದ್ದಾರೆ.
ಎಲ್ಲರೂ ನಾಳೆಗಳನ್ನು ಗೆಲ್ಲುವ ಧಾವಂತದಲ್ಲಿದ್ದಾರೆ.
ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ WhatsApp ನಲ್ಲಿ, Online Group ಗಳಲ್ಲಿ, Social Media ಗಳಲ್ಲಿ ತಡಕಾಡುವುದು ಒಂದಷ್ಟು ಮಂದಿ ಒಟ್ಟಿಗೆ ಸಿಗುತ್ತಾರಲ್ಲಾ ಎಂಬ ಕಾತರದಿಂದ. ಒಟ್ಟಾಗಿ ಜಗಳ ಮಾಡುವ ಆಸೆಯಿಂದ.
ಜಗಳ ಮಾಡುವುದೂ ಕೂಡಾ ಮತ್ತೊಬ್ಬರೊಡನೆ ಒಂದಷ್ಟು ಹೊತ್ತು Spent ಮಾಡುವುದಕ್ಕಾಗಿ.
ಪ್ರೀತಿಸುವುದಕ್ಕೆ, ಪಕ್ಕೆಲುಬುಗಳು ಪುಡಿಪುಡಿಯಾಗುವಂತೆ ಆಲಂಗಿಸುವುದಕ್ಕೆ, ಚುಂಬಿಸುವುದಕ್ಕೆ, ಕೈ ಕೈ ಹಿಡಿದುಕೊಂಡು ಒಂದಷ್ಟು ದೂರ ನಡೆಯುವುದಕ್ಕೆ, ನಿರುಮ್ಮಳವಾಗಿ ನಗುವುದಕ್ಕೆ ಸ್ವಲ್ಪವೂ ಬಿಡುವಿಲ್ಲದಂತೆ ಜಗತ್ತೂ ಕೂಡಾ ನಮ್ಮೊಂದಿಗೇ ಓಡುತ್ತಲಿದೆ.
ಎಲ್ಲರೂ ಒಂದೊಂದು ದ್ವೀಪದಂತಾಗುವ ಸ್ಥಿತಿಯನ್ನು ನಾವಾಗಿಯೇ ಸೃಷ್ಟಿಸಿಕೊಂಡಿದ್ದೇವೆಯೇ?
ನಮಗೆ ಬೇಕಾಗಿರುವುದು ಸ್ವಯಂಪೂರ್ಣತೆಯೇ? ಸಹಬಾಳ್ವೆಯೇ?...

Tuesday, December 29, 2015

ಪ್ರತಿಭಾ ನಂದಕುಮಾರ್ ಅನುವಾದಿಸಿದ ಸುಂದರವಾದ ಎರಡು ಗಾಲಿಬ್ ಕವಿತೆಗಳು.....


"ಸುಂದರವಾದ ಅನುವಾದ ಪ್ರಾಮಾಣಿಕವಾಗಿರುವುದಿಲ್ಲ" ಮತ್ತು  "ಪ್ರಾಮಾಣಿಕವಾದ ಅನುವಾದ ಸುಂದರವಾಗಿರುವುದಿಲ್ಲ" ಎಂಬ ಮಾತಿದೆ. ಒಟ್ಟಿನಲ್ಲಿ ಮಿರ್ಜಾ ಗಾಲಿಬ್ ಗೆ ಅನ್ಯಾಯವಾಗದಂತೆ ಪ್ರತಿಭಾ ನಂದಕುಮಾರ್ ರವರು ಅನುವಾದಿಸಿದ ನನಗೆ ತುಂಬಾ ಮೆಚ್ಚುಗೆಯಾದ ಎರಡು ಕವಿತೆಗಳು..... 


ಹಸ್ತರೇಖೆಯನ್ನು ನಂಬಬೇಡಾ ಗಾಲಿಬ್
ಒಲಿಯುತ್ತದೆ ಅದೃಷ್ಟ 
ಹಸ್ತವೇ ಇಲ್ಲದಿರುವವರಿಗೂ


ವಜೀರ್, ನಿನ್ನ ಪ್ರಾರ್ಥನೆಗೆ ತಾಕತ್ತಿದ್ದರೆ 
ಮಸೀದಿಯನ್ನು ಅಲ್ಲಾಡಿಸಿ ತೋರಿಸು
ಇಲ್ಲದಿದ್ದರೆ ಬಾ ಎರಡು ಗುಟುಕು ಕುಡಿದು
ಮಸೀದಿ ಅಲ್ಲಾಡುವುದನ್ನು ನೋಡು

Wednesday, December 23, 2015

എം.എന്‍. കാരശ്ശേരി - ഒരു ലേഖനം

ഏതാണ് ഇസ്ലാം?


കെ.പി. രാമനുണ്ണിയുടെ 'ഇതാണ് ഇസ്ലാം' എന്ന ലേഖനത്തിന് ഒരു മറുപടി....

വിശ്വാസികളുടെ നന്മകളെല്ലാം മതത്തിന്റെ കണക്കിലെഴുതിയാല്‍ അവരുടെ തിന്മകളും ആ കണക്കില്‍ എഴുതേണ്ടിവരില്ലേ?

മലബാറിലെ കടലുണ്ടിയില്‍നിന്നാണ് ഇക്കഴിഞ്ഞ ഏപ്രില്‍ എട്ടാംതീയതി ആ വാര്‍ത്ത വന്നെത്തിയത്: പുലര്‍ച്ചയ്ക്ക് തീവണ്ടിപ്പാളം മുറിച്ചുകടക്കുമ്പോള്‍ വണ്ടി ഓടിയടുക്കുന്നത് ശ്രദ്ധയില്‍പ്പെടാതെപോയ ബധിരനായ സുഹൃത്ത് രാമനെ രക്ഷിക്കാനുള്ള പരിശ്രമത്തില്‍ അബ്ദുറഹിമാന്‍ തീവണ്ടിതട്ടി മരിച്ചുപോയി. കഷ്ടം, ഈ കഥയൊന്നുമറിയാതെ തൊട്ടുപിറകെ രാമനും അന്ത്യശ്വാസം വലിച്ചു. ആര്‍ക്കും എളുപ്പത്തില്‍ മനസ്സിലാവുന്ന അപായസാധ്യത അവഗണിച്ചുകൊണ്ട് അതിനുപുറപ്പെട്ട അബ്ദുറഹിമാന്റെ മരണം എല്ലാ അര്‍ഥത്തിലും 'ബലി'യാണ്. മനുഷ്യപ്പറ്റിന്റെ ഉദാത്ത മാതൃകയാണദ്ദേഹം; സഹജീവിസ്‌നേഹത്തിന്റെ രക്തസാക്ഷി. അദ്ദേഹത്തിന്റെ സ്മരണയെ ഞാന്‍ ആദരപൂര്‍വം അഭിവാദ്യം ചെയ്യുന്നു.

അപകടത്തില്‍പ്പെട്ട് നിരത്തില്‍ക്കിടക്കുന്നവരെ നാട്ടുകാര്‍ തിരിഞ്ഞുനോക്കാത്തതിനാല്‍ പലരും ചോരവാര്‍ന്ന് മരിക്കുന്നതിന്റെ നിര്‍ദയമായ വാര്‍ത്തകള്‍ ധാരാളമായി കണ്ടും കേട്ടും മനസ്സുമടുക്കുന്നതിന്റെ നടുവിലേക്കാണ് അവിശ്വസനീയമായ ഈ കഥ വരുന്നത്. അതു നമുക്ക് മനുഷ്യജീവിയിലുള്ള വിശ്വാസം വര്‍ധിപ്പിക്കുന്നുണ്ട്, നമ്മെ ശുദ്ധീകരിക്കുന്നുണ്ട്. ഈയിടെ നമ്മള്‍ മലയാളികള്‍കേട്ട അപൂര്‍വം 'വിശുദ്ധവാര്‍ത്തകളി'ലൊന്നാണത്. അബ്ദുറഹിമാന്റെ മനുഷ്യസ്‌നേഹത്തെ മാധ്യമങ്ങള്‍ എടുത്തുപറഞ്ഞതുചിതമായി. അതിനെ വാഴ്ത്താന്‍വേണ്ടി പ്രശസ്ത കഥാകാരന്‍ കെ.പി. രാമനുണ്ണി 'മാതൃഭൂമി'യില്‍ ലേഖനമെഴുതിയതും (23 ഏപ്രില്‍) വേണ്ടതുതന്നെ. 'ഇതാണ് ഇസ്ലാം' എന്നുപേരായ ആ ലേഖനത്തിലെ സമീപനം നിര്‍ഭാഗ്യവശാല്‍, ചില ഗുരുതരമായ പ്രശ്‌നങ്ങളുയര്‍ത്തുന്നുണ്ട്.
അബ്ദുറഹിമാന്റെ ഉത്തുംഗമായ ത്യാഗസന്നദ്ധത ഇസ്ലാംമതവിശ്വാസിയായതുകൊണ്ടുണ്ടായതാണെന്ന തീര്‍പ്പാണ് ലേഖനത്തിന്റെ തലക്കെട്ടിലും വിശകലനത്തിലും വെളിപ്പെടുന്നത്. രാമനുണ്ണി എഴുതുന്നു: ''പ്രവാചകന്റെ ശരിയായ ഇസ്ലാം എന്താണെന്ന് നമ്മുടെ കടലുണ്ടിക്കാരനായ അബ്ദുറഹിമാന്‍ ജീവിച്ചുകാണിച്ചുവെന്നത് ചെറിയൊരു കാര്യമല്ല''. ഇത് യുക്തിസഹമല്ല എന്നതിലേക്ക് വസ്തുതകള്‍ പലതുണ്ട്.

1. ഇസ്ലാം മതാനുയായികളിലെല്ലാം ഈ സ്‌നേഹം കാണുന്നില്ല.
2. ചില ഇസ്ലാം മതാനുയായികളില്‍ ചിലപ്പോള്‍ ഇതിന് നേര്‍വിപരീതം കണ്ടിട്ടുണ്ട്.
3. മറ്റുമതത്തിന്റെ അനുയായികളിലും ചിലപ്പോള്‍ ഈ ഗുണം കാണാനുണ്ട്.
4. ഒരുമതത്തിലും വിശ്വസിക്കാത്തവരിലും ഇത്തരം നന്മകള്‍ ചിലപ്പോള്‍ കണ്ടിട്ടുണ്ട്.
അബ്ദുറഹിമാന്റെ വ്യക്തിത്വത്തിന് പല തലങ്ങളുണ്ട് മലയാളിയാണ്, മലബാറുകാരനാണ്, പുരുഷനാണ്, വൃദ്ധനാണ്, ഇസ്ലാംമതവിശ്വാസിയാണ്, മറ്റും മറ്റും. ഇതിലേതാണ് ഈ ജീവദാനത്തെ പ്രചോദിപ്പിച്ചത്? ഇതെല്ലാം കൂടിച്ചേര്‍ന്നതാവാം. എന്റെ നോട്ടത്തില്‍, അദ്ദേഹത്തിന്റെ സഹജപ്രകൃതിയാണ് ഇതില്‍ ഏറ്റവും പ്രധാനം.
രാമനുണ്ണി ആ വ്യക്തിത്വത്തെ മതവിശ്വാസം മാത്രമായി ചുരുക്കിക്കാണുന്നുവെന്നതാണു തകരാറ്. യാദൃച്ഛികമായി ജനിച്ചുവളര്‍ന്ന മതസമൂഹത്തിന്റെ അംശമായും മതമൂല്യങ്ങളുടെ പ്രതീകം മാത്രമായും വ്യക്തിയെ കാണുന്നത് വിഭാഗീയതയാണ്. ഇങ്ങനെ ആളുകളെ വകതിരിച്ചുകാണിക്കുന്നത് സമൂഹത്തില്‍ വര്‍ഗീയത വളര്‍ത്തും.

തനിക്കാവശ്യമില്ലാത്തിടത്ത് ലേഖകന്‍ ഈമട്ടിലല്ല വ്യക്തികളെ കാണുന്നതെന്നതിന് ലേഖനത്തില്‍ത്തന്നെ തെളിവുണ്ട്. ഈ വാക്യം നോക്കൂ: ''അബ്ദുറഹിമാന്റെ ആത്മബലിക്ക് തൊട്ടടുത്ത ദിനത്തിലാണല്ലോ കോട്ടയത്ത് റെയില്‍വേട്രാക്കില്‍ കുഴഞ്ഞുവീണ സ്ത്രീയെ ചില ചെറുപ്പക്കാര്‍ രക്ഷിക്കുന്നതിനു പകരം വീഡിയോയില്‍ പകര്‍ത്തി വാട്ട്‌സ്ആപ്പില്‍ വിട്ടത്''. സേവനസന്നദ്ധതയില്ലാത്ത അവര്‍ ഏതുമതക്കാരാണ്? കൂട്ടത്തില്‍ ഇസ്ലാംമതവിശ്വാസികളാരുമില്ലെന്നെങ്ങനെ പറയും? സംഭവം കോട്ടയത്താണ്. അവര്‍ ആ നാട്ടുകാരാണോ? അതാണോ പ്രശ്‌നം? 'ചെറുപ്പക്കാര്‍' എന്നുമാത്രമേ പറഞ്ഞിട്ടുള്ളു. ആ ക്രൂരത പുതിയ തലമുറയുടെ കുറ്റം എന്നെടുക്കണമോ? ഏതായാലും ഇവിടെ മതം ഇല്ല!

ഞാന്‍ ചോദിക്കട്ടെ: വിശ്വാസികളുടെ നന്മകളെല്ലാം മതത്തിന്റെ കണക്കിലെഴുതിയാല്‍ അവരുടെ തിന്മകളും ആ കണക്കിലെഴുതേണ്ടിവരില്ലേ? അതു സമ്മതമല്ലെന്നുപറയുന്നതിനു യുക്തിയുണ്ടോ? ഉദാഹരണം പറഞ്ഞാല്‍ കാര്യം വിശദമാവും:
1. 'പ്രവാചകനിന്ദ'യുടെ പേരില്‍ പ്രൊഫ. ജോസഫിന്റെ വലംകൈ വെട്ടിയ പോപ്പുലര്‍ഫ്രണ്ടുകാരുടെ ക്രൂരത ഒരു ഭാഗത്ത്. അതിനെ വിമര്‍ശിക്കുന്നതിന്റെ പേരില്‍ ജോസഫിന് ആസ്​പത്രിയില്‍ച്ചെന്ന് ചോരകൊടുത്ത ജമാഅത്തെ ഇസ്ലാമിക്കാരുടെ ഉദാരത മറുഭാഗത്ത് രണ്ടുകൂട്ടരും ഇസ്ലാം മതാനുയായികള്‍. രണ്ടുംകൂടി ഒരുകണക്കില്‍ ചേരുമോ? ഏതാണ് ഇസ്ലാം?
2. വിദ്യ അഭ്യസിക്കാന്‍ പാടില്ലെന്ന് താലിബാന്‍. സ്ത്രീക്ക് അതിനു സ്വാതന്ത്ര്യമുണ്ടെന്ന് മലാല. ഒടുക്കം ആ പെണ്‍കിടാവിന്റെ തലയിലേക്ക് താലിബാന്‍ വെടിവെയ്ക്കുന്നു രണ്ടുകൂട്ടരും ഇസ്ലാം മതാനുയായികള്‍. രണ്ടുംകൂടി ഒരുകണക്കില്‍ പോവുമോ? ഏതാണ് ഇസ്ലാം?

രാമനുണ്ണിയുടെ ലേഖനം ചെയ്ത അപരാധം മഹത്തായൊരു മാനുഷികാനുഭവത്തെ ഒരു മതത്തിന്റേതു മാത്രമായി വെട്ടിക്കുറച്ചുവെന്നതാണ്. എന്തിനേറെ, മലയാളികള്‍ക്കോ മലബാറുകാര്‍ക്കോ കടലുണ്ടിക്കാര്‍ക്കോ മുതിര്‍ന്ന തലമുറക്കാര്‍ക്കോപോലും അതിന്റെ കൃതാര്‍ഥതയില്‍ ഒരുപങ്കുമനുവദിക്കാത്തമട്ടില്‍ അദ്ദേഹമതിനെ വിഭാഗീകരിച്ചുകളഞ്ഞു; സ്വത്വത്തിന്റെ അടിസ്ഥാനം മതം മാത്രമാണെന്ന് സിദ്ധാന്തിച്ചുകളഞ്ഞു.

നമ്മുടെ നാട്ടില്‍ ഇപ്പോള്‍ പുലര്‍ന്നുവരുന്ന മതേതരത്വത്തിന്റെ ഒരു മാതൃക അങ്ങേയറ്റം അപകടകരമാണ് താന്‍ ജനിച്ചുവളര്‍ന്ന സമുദായത്തിന്റെ വിഭാഗീയതയെ പിന്തുണയ്ക്കുന്നത് വര്‍ഗീയതയും അന്യസമുദായത്തിന്റെ വിഭാഗീയതയെ പിന്തുണയ്ക്കുന്നത് മതേതരത്വവും എന്നതാണ് ആ സിദ്ധാന്തം!

ഇങ്ങനെയൊന്നുണ്ടോയെന്നു സംശയിക്കുന്നവര്‍ക്ക് ഞാന്‍ തെളിവുതരാം: കടലുണ്ടിസംഭവം ഒന്നു തിരിച്ചിട്ടുനോക്കുക അപകടത്തില്‍പ്പെടാന്‍പോയത് അബ്ദുറഹിമാനും രക്ഷിക്കാന്‍ശ്രമിച്ച് 'ബലി'യായിത്തീര്‍ന്നത് രാമനുമാണെന്നിരിക്കട്ടെ. എങ്കില്‍ രാമനെ വാഴ്ത്തിക്കൊണ്ട് കെ.പി. രാമനുണ്ണി 'ഇതാണ് ഹിന്ദു' എന്ന് ലേഖനമെഴുതുമോ? ഇല്ല. അത് വര്‍ഗീയതയാണെന്ന് അദ്ദേഹത്തിനറിയാം; വായനക്കാര്‍ക്കുമറിയാം! കണ്ടോ, നിലപാടല്ല, ആള്‍ഭാഗം മാറിനിന്നതുകൊണ്ടാണ് വര്‍ഗീയത മതേതരത്വമായി തെറ്റിദ്ധരിക്കപ്പെടുന്നത്.
ഈ ഇടപാട് കുറച്ചായി നടന്നുവരുന്നു. ഈ കച്ചവടത്തില്‍ ചില സാഹിത്യകാരന്മാര്‍ക്കൊപ്പം ചില മുന്‍ നക്‌സലൈറ്റുകളുണ്ട്, ചരിത്രകാരന്മാരുണ്ട്, ഗവേഷകന്മാരുണ്ട്, അധ്യാപകരുണ്ട്, പൗരാവകാശപ്രവര്‍ത്തകരുണ്ട്, മാധ്യമപ്രവര്‍ത്തകരുണ്ട്, പരിസ്ഥിതിവാദികളുണ്ട്, സ്ത്രീവാദികളുണ്ട്... പതുക്കെപ്പതുക്കെ രൂപംകൊണ്ടുവരുന്ന സ്വത്വരാഷ്ട്രീയത്തിന്റെ ഈ ആയുധപ്പുര തിരിച്ചറിയാന്‍ ഇക്കൂട്ടര്‍ക്കു ലഭിക്കുന്ന സ്ഥാനമാനങ്ങളും സമ്മാനങ്ങളും സൗജന്യങ്ങളും ശ്രദ്ധിച്ചാല്‍മതി. 'സ്വത്വരാഷ്ട്രീയ'ത്തിന്റെ വിത്താണ് ആ ലേഖനത്തില്‍ കിടക്കുന്നത്.

ഇന്നു പറഞ്ഞുകേള്‍ക്കുന്ന മതസമൂഹങ്ങളുടെ 'സ്വത്വരാഷ്ട്രീയം' മതരാഷ്ട്രവാദത്തിന്റെ പുതിയവേഷം മാത്രമാണ്. ഭൂരിപക്ഷം ജനങ്ങളുടെ അഭിലാഷത്തിനുമേലെയാണ് മതപാരമ്പര്യം എന്നതാണ് അതിന്റെ ഉള്ളടക്കം. മതനിയമങ്ങള്‍ രാഷ്ട്രനിയമങ്ങളാക്കിത്തീര്‍ക്കുക എന്നതാണ് അതിന്റെ ലക്ഷ്യം. അതുകൊണ്ടുതന്നെ അത് ജനാധിപത്യവിരുദ്ധമാണ്; ഏതു വിഭാഗക്കാരന്റേതാണെങ്കിലും.
എനിക്കു മനസ്സിലാവുന്നില്ല: സ്വത്വരാഷ്ട്രീയം ഇസ്ലാമിസ്റ്റുകളുടേതാവുമ്പോള്‍ ജനാധിപത്യവും (ഡെമോക്രസി) ഹിന്ദുത്വക്കാരുടേതാവുമ്പോള്‍ സര്‍വാധിപത്യവും (ഫാസിസം) ആയിത്തീരുന്നതെങ്ങനെയാണ്?

ಕಾಣದ ಕಡಲಿಗೆ ಹಂಬಲಿಸಿದೆ ಮನ.................



ವಿದ್ಯಾರ್ಥಿ ಜೀವನ ಮುಗಿದು ಕೆಲಸಕ್ಕಾಗಿ ಅಲೆಯುತ್ತಿದ್ದ ಅತ್ಯಂತ ದುರ್ಬರವಾದ ದಿನಗಳಲ್ಲಿ ಮೊತ್ತ ಮೊದಲ ಬಾರಿಗೆ ನಾನು ಜಿ.ಎಸ್.ಎಸ್ ರವರ "ಕಾಣದ ಕಡಲಿಗೆ ಹಂಬಲಿಸಿದೆ ಮನ" ಎಂಬ ಈ ಕವನವನ್ನು ಅಶ್ವಥ್ ರವರ ಸಿರಿಕಂಠದಲ್ಲಿ ಕೇಳಿದ್ದೆ. ಒಂದೇ ಸಲಕ್ಕೆ ಮನಸ್ಸನ್ನು ಹೊಕ್ಕ ಈ ಗೀತೆ ಇಂದಿಗೂ ಕೂಡಾ ನಾನು ಇಷ್ಟಪಟ್ಟು ಕೇಳುವ ಕೆಲವೇ ಗೀತೆಗಳಲ್ಲಿ ಒಂದು. ನನ್ನ ನಿರುದ್ಯೋಗದ ದಿನಗಳಲ್ಲಿ, ರೋಗ ಪೀಡಿತನಾಗಿ ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲಿ, ವೈವಾಹಿಕ ಬದುಕಿನ ಏಳು ಬೀಳುಗಳಲ್ಲಿ, ಹರ್ಷದ ದಿನಗಳಲ್ಲಿ....... ನಾನಾ ಅರ್ಥಗಳನ್ನು ಹೊಮ್ಮಿಸುತ್ತಾ ನನ್ನೊಳಗೆ ನಿರಂತರವಾಗಿ ಹರಿಯುತ್ತಿರುವ ಈ ಗೀತೆಯನ್ನು ಇಲ್ಲಿ ಮತ್ತೊಮ್ಮೆ ನೆನಪಿಸಿಕೊಂಡಿದ್ದೇನೆ.


ಕಾಣದ ಕಡಲಿಗೆ ಹಂಬಲಿಸಿದೆ ಮನ


ಕಾಣಬಲ್ಲೆನೆ ಒಂದು ದಿನ ಕಡಲೊಳು


ಕೂಡಬಲ್ಲೆನೆ ಒಂದು ದಿನ || ಕಾಣದ ||




ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ


ನನ್ನ ಕಲ್ಪನೆಯು ತನ್ನ ಕಡಲನೆ ಛಿದ್ರಿಸಿ ಚಿಂತಿಸಿ ಸುರಿಯುತಿದೆ


ಎಲ್ಲಿರುವುದೋ ಅದು ಎಂತಿರುವುದೋ ಅದು


ನೋಡಬಲ್ಲೆನೆ ಒಂದು ದಿನ ಕಡಲನು ಕೂಡಬಲ್ಲೆನೆ ಒಂದು ದಿನ || ಕಾಣದ ||




ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಾಗಿಹುದಂತೆ


ಸುನಿಲ ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ ತಾನಂತೆ


ಮುನ್ನೀರಂತೆ ಅಪಾರವಂತೆ


ಕಾಣಬಲ್ಲೆನೆ ಒಂದು ದಿನ ಅದರೊಳು ಕರಗಲಾರೆನೆ ಒಂದು ದಿನ || ಕಾಣದ ||




ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು


ಎಂದಿಗಾದರೂ ಕಾಣದ ಕಡಲಿಗೆ ಸೇರಬಲ್ಲೆ ನೀನು


ಸೇರಬಹುದೇ ನಾನು ಕಡಲ ನೀಲಿಯೊಳು ಕರಗಬಹುದೇ ನಾನು || ಕಾಣದ ||

Monday, December 14, 2015

ಮದರ್ ತೆರೇಸಾರ ಬಗ್ಗೆ ಓಶೋ....

ನಾನು ಅಪಾರವಾಗಿ ಮೆಚ್ಚುವ ಕೆಲವೇ ಚಿಂತಕರಲ್ಲಿ ಓಶೋ ರಜನೀಶ್ ಕೂಡಾ ಒಬ್ಬರು. ಇತ್ತೀಚೆಗಷ್ಟೇ ನಾನು ಓದಿದ ಓಶೋ ರವರ "ರಾಜಕೀಯದ ಮಧ್ಯೆ ಬಿಡುವು" ಪುಸ್ತಕದಲ್ಲಿನ ಮದರ್ ತೆರೇಸಾ ಕುರಿತ ಲೇಖನವೊಂದು ಮಾನವೀಯತೆ, ಸೇವಾ ಮನೋಭಾವ, ದಾನ ನೀಡಿಕೆ ಮನುಷ್ಯನ ಆಳದಲ್ಲಿ ಹುದುಗಿರಬಹುದಾದ ಸ್ವಾರ್ಥ ಎಲ್ಲವುಗಳ ಬಗ್ಗೆ ನನ್ನನ್ನು ಆಳವಾಗಿ ಚಿಂತಿಸುವಂತೆ ಮಾಡಿತು. ಬಾಲ್ಯದಿಂದಲೇ ತ್ಯಾಗ ಮತ್ತು ಮಾತೃತ್ವದ ಮೂರ್ತರೂಪದಂತೆ ಕಂಡಿದ್ದ "ಮದರ್ ತೆರೇಸಾ" ರನ್ನು ಓಶೋ "ಸೋಗುಗಾರ್ತಿ", "ಹಿಪೋಕ್ರಿಟ್" ಇತ್ಯಾದಿಯಾಗಿ ಕರೆದಿದ್ದು ಸಿಟ್ಟು ತರಿಸಿತ್ತಾದರೂ ನಿಧಾನಕ್ಕೆ ಓಶೋರ ವಿಚಾರಗಳಲ್ಲಿ ಸತ್ಯಾಂಶವಿದೆಯಲ್ಲಾ ಎನ್ನಿಸತೊಡಗಿತು.....

ಮದರ್ ತೆರೇಸಾರ ಬಗ್ಗೆ ಓಶೋ....


ವಂಚಕಿ ಎಂದು ನಾನು ಆಕೆಯನ್ನು ಕರೆದದ್ದು ಕೇವಲ ಆಕೆ ಬೇರೆಯವರನ್ನು ವಂಚಿಸುತ್ತಾಳೆಂದಲ್ಲ. ವಂಚನೆಯು ಮೊದಲು ತನ್ನಿಂದಲೇ ಶುರುವಾಗುತ್ತದೆ. ನೀವು ಇತರರನ್ನು ವಂಚಿಸಬೇಕೆಂದುಕೊಂಡರೆ, ಮೊದಲು ನಿಮ್ಮನ್ನು ನೀವು ವಂಚಿಸಿಕೊಳ್ಳಬೇಕಾಗುತ್ತದೆ. ಇದು ಎರಡು ಕಡೆ ಹರಿತವಿರುವ ಖಡ್ಗದ ಹಾಗೆ. ಮದರ್ ತೆರೆಸಾ ಬಡವರ, ಅನಾಥರ, ವಿಧವೆಯರ ಮತ್ತು ವೃದ್ದರ ಸೇವೆಯನ್ನು ಒಳ್ಳೆಯ ಉದ್ದೇಶವಿಟ್ಟುಕೊಂಡೇ ಮಾಡುತ್ತಿರಬಹುದು. ಆಕೆಯ ಪ್ರಾಮಾಣಿಕತೆಯ ಬಗ್ಗೆ ನನಗೆ ಎಳ್ಳಷ್ಟೂ ಸಂಶಯವಿಲ್ಲ. ಆಕೆಯ ಉದ್ದೇಶಗಳು ತಪ್ಪೆಂದೂ ನಾನು ಹೇಳುತ್ತಿಲ್ಲ. ಆದರೆ ಒಳ್ಳೆಯ ಉದ್ದೇಶವಿದ್ದ ಮಾತ್ರಕ್ಕೆ ಫಲಿತಾಂಶವೂ ಒಳ್ಳೆಯದೇ ಆಗಿರಬೇಕೆಂಬ ನಿಯಮವಿಲ್ಲ. ನೀವು ಹೂಗಳೇ ಅರಳದ ಒಂದು ಮುಳ್ಳಿನ ಮರದ ಬೀಜವನ್ನು ಬಿತ್ತಿ ಅದರಿಂದ ಸುಂದರ ಹೂಗಳು ಬೆಳೆಯಬೇಕೆಂದು ನಿರೀಕ್ಷಿಸಿದರೆ ನಿಮಗೆ ಮುಳ್ಳುಗಳಲ್ಲದೇ ಬೇರೇನು ಸಿಗುವುದಿಲ್ಲ. ಏಕೆಂದರೆ ನೀವು ನೆಟ್ಟಿದ್ದು ಹೂವಿನ ಗಿಡವಲ್ಲ. ಇಲ್ಲಿ ಹೂವನ್ನು ಬೆಳೆಯುವ ನಿಮ್ಮ ಉದ್ದೇಶ ಒಳ್ಳೆಯದೇ ಇರಬಹುದು ಆದರೆ ಫಲಿತಾಂಶವು ಯಾವಾಗಲೂ ನಿಮ್ಮ ಕ್ರಿಯೆಯನ್ನವಲಂಬಿಸಿರುತ್ತದೆ ಹೊರತು ನಿಮ್ಮ ಉದ್ದೇಶಗಳನ್ನಲ್ಲ.

ತೆರೆಸಾ ಬಡವರ ಸೇವೆ ಮಾಡುತ್ತಿರುವುದು ನಿಜ, ಆದರೆ ಬಡವರು ನೂರಾರು ವರ್ಷಗಳಿಂದ ಸೇವೆ ಪಡೆಯುತ್ತಿದ್ದಾರೆ. ಅದರಿಂದ ಬಡತನವನ್ನಂತೂ ನಾಶಮಾಡಲಾಗಿಲ್ಲ. ಬಡವರ ಸೇವೆ ಮಾಡುವುದರಿಂದ ಬಡತನ ನಾಶವಾಗುವುದಿಲ್ಲ. ತೆರೆಸಾರಂತವರು ಬಡವರ ಸೇವೆ ಮಾಡಿ, ಅವರನ್ನು ಸಮಾಜ ತಿರಸ್ಕರಿಸುತ್ತಿಲ್ಲ ಎಂಬ ಭಾವನೆ ಮೂಡಿಸುತ್ತಾರಷ್ಟೇ. ಇಲ್ಲವಾದಲ್ಲಿ ಬಡವರಿಗೆ ತಾವು ತಿರಸ್ಕೃತರು ಎನ್ನಿಸಿ, ಅವರ ಅಸಹಾಯಕತೆ ಕೋಪಕ್ಕೆ ತಿರುಗಿ ಅವರು ಕ್ರೂರಿಗಳಾಗುತ್ತಾರೆ. ಸಮಾಜದ ವಿರುದ್ದ ಬಂಡೇಳುತ್ತಾರೆ. ಬಡವರ, ಅನಾಥರ ಮತ್ತು ವಿಧವೆಯರ ಸೇವೆ ಮಾಡುವಂತೆ ಸೋಗು ಹಾಕುವ ಮಿಶನರಿಗಳು ನಿಜದಲ್ಲಿ ಅವರನ್ನು ಶೋಷಿಸುತ್ತಿರುತ್ತವೆ. ಮದರ್ ತೆರೆಸಾ ನಡೆಸುವ ಮಿಶನರಿ ಆಫ್ ಚಾರಿಟಿಯಲ್ಲಿ ೭೦೦೦ ಅನಾಥರು ಬಡವರಿಗೆ ನಿತ್ಯ ಊಟ ಹಾಕಲಾಗುತ್ತದೆ. ಅಷ್ಟು ದುಡ್ಡು ಮಿಶನರಿಗಳಿಗೆ ಎಲ್ಲಿಂದ ಬರುತ್ತದೆ?

೧೯೭೪ ರಲ್ಲಿ ಪೋಪ್ ಮದರ್ ತೆರೆಸಾಗೆ ಒಂದು ಕಾಡಿಲ್ಯಾಕ್ ಕಾರನ್ನು ಉಡುಗೊರೆಯಾಗಿ ಕೊಟ್ಟರು. ಆಕೆ ತಕ್ಷಣ ಅದನ್ನು ಮಾರಿ, ಅದರಿಂದ ಬಂದ ಹಣವನ್ನು ಬಡವರಿಗಾಗಿ ಖರ್ಚು ಮಾಡಿದರು. ಎಲ್ಲರೂ ಅದನ್ನು ಹೊಗಳಿದರು. ಆದರೆ ನನ್ನ ಪ್ರಶ್ನೆ ಕಾರು ಕೊಳ್ಳಲು ಹಣ ಬಂದಿದ್ದಾದರೂ ಎಲ್ಲಿಂದ? ಪೋಪ್ ಹಣವನ್ನು ಧಿಡೀರ್ ಎಂದು ಉತ್ಪತ್ತಿ ಮಾಡಿರಲಿಕ್ಕಿಲ್ಲ. ಆತನು ಅದನ್ನು ಶೇಖರಿಸಿಟ್ಟಿದ್ದ. ಒಂದು ಕಾರನ್ನು ಉಡುಗೊರೆಯಾಗಿ ನೀಡುವಷ್ಟು ದುಡ್ಡು ಪೋಪನ ಬಳಿ ಇತ್ತು. ಮತ್ತು ಆತನ ಹತ್ತಿರ ಜಗತ್ತಿನ ಎಲ್ಲ ಶ್ರೀಮಂತರ ಬಳಿ ಇರುವಷ್ಟೇ ಹಣವಿದೆ. ದುಡ್ಡು ಎಲ್ಲಿಂದ ಬಂತು? ಆತ ಕೂಡಿಟ್ಟ ದುಡ್ಡಿನ ಶೇಕಡ ರಷ್ಟೂ ಅಲ್ಲದ ದುಡ್ಡು ಬಡವರ ಸೇವೆಗೆಂದು ಮೀಸಲು. ಮಿಶನರಿ ಆಫ್ ಚಾರಿಟಿಗಳು ನಿಜದಲ್ಲಿ ಬಂಡವಾಳಶಾಹಿಗಳ ಸೇವೆ ಮಾಡುತ್ತವೆ. ಆದರೆ ಬಡವರ ಸೇವೆ ಮಾಡುತ್ತಿರುವಂತೆ ಸೋಗು ಹಾಕುತ್ತವೆ. ಇದರಿಂದ ಬಡವರ ಮನದಲ್ಲಿ ಇದೊಂದು ಉತ್ತಮ ಸಮಾಜ ಹಾಗೂ ಇದರ ವಿರುದ್ದ ನಾವು ದನಿಯೆತ್ತಬಾರದೆಂಬ ಭಾವ ಗಾಢವಾಗುತ್ತದೆ. ಮಿಶನರಿಗಳು ರೈಲ್ವೆ ಬೋಗಿಗಳೆರಡಕ್ಕೂ ಘರ್ಷಣೆಯಾಗದಂತೆ ಇರಲು ಬಳಸುವ ಕೀಲೆಣ್ಣೆಗಳ ತರಹ ಕೆಲಸ ಮಾಡುತ್ತವೆ. ಬಡವರ ಮನದಲ್ಲಿ ಆಶೆ ಹುಟ್ಟಿಸಿ ಅವರು ಸಮಾಜದ ವಿರುದ್ದ ಹೋರಾಡದೆ ಅದರ ಗುಲಾಮನಾಗುವಂತೆ ಮಾಡುವುದೇ ಇವರ ಮೂಲ ಉದ್ದೇಶವಾಗಿರುತ್ತದೆ.

ಮದರ್ ತೆರೆಸಾಗೆ ನೊಬೆಲ್ ಪ್ರಶಸ್ತಿ ನೀಡಬಾರದಿತ್ತೆಂದು ನಾನು ಹೇಳಿದ್ದೇನೆ. ಇದರಿಂದ ಆಕೆ ಕೋಪಗೊಂಡಂತಿದೆ. ಆದರೆ ನೊಬೆಲ್ ಎನ್ನುವ ಮನುಷ್ಯ ಜಗತ್ತಿನ ಅತಿ ದೊಡ್ಡ ಪಾತಕಿಗಳಲ್ಲೊಬ್ಬ. ಮೊದಲನೇ ಮಹಾಯುದ್ದವು ಈತನಿಂದ ಖರೀದಿಸಿದ ಶಸ್ತ್ರಾಸ್ತ್ರಗಳಿಂದಲೇ ನಡೆದದ್ದು. ಈತನು ಮೊದಲನೆ ಮಹಾಯುದ್ದದಿಂದ ಸಾಕಷ್ಟು ಹಣ ಸಂಗ್ರಹಿಸಿದ. ಅಮಾಯಕ ಜನರನ್ನು ಕೊಂದ. ಸಾವಿನ ಸರದಾರನಾಗಿದ್ದ. ಈತ ಸಂಗ್ರಹಿಸಿಟ್ಟಿದ್ದ ಹಣದ ಬಡ್ಡಿಯನ್ನೇ ಈಗ ಪ್ರತಿ ವರ್ಷವೂ ಡಜನುಗಟ್ಟಲೇ ನೊಬೆಲ್ ಬಹುಮಾನಗಳಾಗಿ, ಇಪ್ಪತ್ತು ಲಕ್ಷದವರೆಗಿನ ಪುರಸ್ಕಾರವಾಗಿ ಹಂಚಲಾಗುತ್ತಿದೆ. ಹಣ ಆತನಿಗೆ ಎಲ್ಲಿಂದ ಬಂತು? ಹೀಗೆ ಸಹಸ್ರಾರು ಜನರ ರಕ್ತದಿಂದ ಬಂದ ಹಣ ಮಿಶನರಿಯಾದ ಮದರ್ ತೆರೆಸಾಗೆ ಕೊಡಲಾಗುತ್ತದೆ ಮತ್ತು ಅದನ್ನು ಆಕೆ ೭೦೦೦ ಜನ ಬಡವರ ಶುಶ್ರೂಶೆಗೆ ಬಳಸುತ್ತಾರೆ. ಮೊದಲು ಸಹಸ್ರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಅನಾಥರಾಗಿಸಿ ಬಂದ ದುಡ್ಡಿನಿಂದ ೭೦೦೦ ಅನಾಥರ, ಬಡವರ ವೃದ್ಧರ ವಿಧವೆಯರ ಶುಶ್ರೂಷೆ ಮಾಡುವುದು ಯಾವ ನ್ಯಾಯ?
ಇಷ್ಟೆಲ್ಲಾ ಗೊತ್ತಿದ್ದು ಮದರ್ ತೆರೆಸಾ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಲಿಲ್ಲ. ಗೌರವ ಪ್ರತಿಷ್ಠೆ ಪಡೆಯುವ ಹಂಬಲ ಆಕೆಯಲ್ಲಿ ಯಾವತ್ತೂ ಇದೆ. ಹಾಗಾಗಿ ಆಕೆ ನೊಬೆಲ್ ಬಹುಮಾನವನ್ನು ಒಪ್ಪಿಕೊಂಡರು.
ಒಬ್ಬ ಧರ್ಮನಿಷ್ಠ ವ್ಯಕ್ತಿಯು ಸಮಾಜದ ಕಟ್ಟುಪಾಡುಗಳನ್ನು ಉಲ್ಲಂಘಿಸಿಯಾದರೂ ಧರ್ಮದ ಪ್ರತಿಷ್ಠಾಪನೆ ಮಾಡುತ್ತಾನೆ. ಸಮಾಜವು ಆತನನ್ನು ತಿರಸ್ಕರಿಸುತ್ತದೆ, ಅಲ್ಲಗೆಳೆಯುತ್ತದೆ. ಆದರೆ ಮದರ್ ತೆರೆಸಾರನ್ನು ಸನ್ಯಾಸಿನಿ ಎಂದು ಉಪ್ಪರಿಗೆ ಮೇಲೆ ಕೂರಿಸಲಾಗುತ್ತಿದೆ. ಮದರ್ ತೆರೆಸಾ ಸರಿಯೆಂದಾದರೆ ಜೀಸಸ್ನನ್ನು ಅಲ್ಲಗೆಳೆಯಬೇಕಾಗುತ್ತದೆ. ಜೀಸಸ್ ಸರಿ ಎಂದಾದಲ್ಲಿ ಮದರ್ ತೆರೆಸಾ ಸೋಗುಗಾರ್ತಿ ಅಲ್ಲದೆ ಮತ್ತೇನು ಅಲ್ಲ. ಕಪಟಿಗಳು ಸೋಗು ಹಾಕುವವರು ಯಾವಾಗಲೂ ಜನರಿಂದ ಸಮಾಜದಿಂದ ಗೌರವ ಪಡೆಯುತ್ತಾರೆ. ಏಕೆಂದರೆ ಅವರು ಸಮಾಜಕ್ಕೆ ಜನರಿಗೆ ಬೇಕಾದ ರೀತಿಯಲ್ಲಿ ಬದಲಾಗಬಲ್ಲರು.
ಪ್ರೊಟೆಸ್ಟನ್ಟ್ ಕ್ರಿಶ್ಚಿಯನ್ ದಂಪತಿಗಳಿಗೆ ತನ್ನ ಅನಾಥಾಲಯದಿಂದ ಮಗುವನ್ನು ದತ್ತು ಕೊಡಲು ನಿರಾಕರಿಸಿದ ಮದರ್ ತೆರೆಸಾ ನೀಡಿದ ಕಾರಣ, ಸಮಯದಲ್ಲಿ ಆಕೆಯ ಆಶ್ರಮದಲ್ಲಿ ಅನಾಥ ಮಕ್ಕಳು ಇರಲಿಲ್ಲ ಎಂದು! ೭೦೦೦ ಜನರ ಅನಾಥಾಶ್ರಮ ನಡೆಸುತ್ತಿರುವ ಆಕೆ ಚಾರಿಟಿ ಮಿಶನರಿನಲ್ಲಿ ದತ್ತು ಕೊಡಲು ಒಂದೇ ಒಂದು ಅನಾಥ ಮಗುವಿಲ್ಲ! ಅದು ಭಾರತದಂತಹ ದೇಶದಲ್ಲಿ ಅನಾಥ ಮಗುವಿಗೆ ಕೊರತೆಯೇ? ಭಾರತೀಯರಂತು ಅಗತ್ಯಕ್ಕಿಂತ ಹೆಚ್ಚಾಗಿ ಅನಾಥರನ್ನು ಹುಟ್ಟುಹಾಕುವಲ್ಲಿ ನಿಷ್ಣಾತರು. ಆದರೆ ನಿಜ ವಿಷಯ ಬೇರೆಯದೆ ಇತ್ತು. ಪ್ರೊಟೆಸ್ಟಂಟ್ ದಂಪತಿಗಳು ಅದಾಗಲೇ ಮಗುವನ್ನು ನೋಡಿ ದತ್ತಕಕ್ಕೆ ಒಪ್ಪಿಯಾಗಿತ್ತು. ಮದರ್ ತೆರೆಸಾಗೆ ಕುಟುಕಿದ್ದು ಅವರು ಆಕೆ ನೀಡಿದ ಫಾರಂನಲ್ಲಿ ತಾವು ಪ್ರೊಟೆಸ್ಟಂಟ್ ಚರ್ಚಿಗೆ ಸಂಬಂಧಿಸಿದವರೆಂದು ದಾಖಲು ಮಾಡಿದುದು. ಮಗುವನ್ನು ಕೊಡದೆ ಇರಲು ಆಕೆ ನೀಡಿದ ನೇರ ಕಾರಣಇಲ್ಲಿನ ಮಕ್ಕಳು ರೋಮನ್ ಕ್ಯಾಥೋಲಿಕ್ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ, ಅವರನ್ನು ಪ್ರೊಟೆಸ್ಟಂಟ್ ಗಳಾಗಿಸುವುದು ಅವರ ಮಾನಸಿಕ ವಿಕಾಸಕ್ಕೆ ಧಕ್ಕೆ ತರಬಹುದು. ಹಾಗಾಗಿ ನಿಮಗೆ ಮಗುವನ್ನು ಕೊಡಲು ಆಗುವುದಿಲ್ಲ’. ಇದರಿಂದ ದತ್ತು ತೆಗೆದುಕೊಳ್ಳಲು ಬಂದ ದಂಪತಿಗಳಿಗೆ ಆದ ಆಘಾತ ಅಷ್ಟಿಷ್ಟಲ್ಲ. ಅವರೇನು ಏನೂ ತಿಳಿಯದವರಲ್ಲ, ಅವರಲ್ಲಿ ಗಂಡನು ಯುರೋಪಿಯನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರರಾಗಿದ್ದಾರೆ.
ನಿಮಗೆ ಒಂದು ವಿಷಯ ತಿಳಿದಿರಲಿ ಅನಾಥ ಮಕ್ಕಳೆಲ್ಲ ಮೂಲ ಹಿಂದುಗಳಾಗಿದ್ದವರು. ಮದರ್ ತೆರೆಸಾಗೆ ಮಕ್ಕಳ ಮಾನಸಿಕ ವಿಕಾಸದ ಬಗ್ಗೆ ಆಷ್ಟು ಕಾಳಜಿ ಇದ್ದಿದ್ದೇ ಆಗಿದ್ದರೆ ಆಕೆ ಹಿಂದುಗಳಾಗಿದ್ದ ಅವರನ್ನು ಹಿಂದುಗಳಾಗಿಯೇ ಬೆಳೆಸಬೇಕಿತ್ತು. ಅವರನ್ನು ರೋಮನ್ ಕ್ಯಾಥೋಲಿಕ್ ಗಳಾಗಿ ಮತಾಂತರಿಸಿದ್ದೇಕೆ? ಈಗ ಅವರನ್ನು ಪ್ರೊಟೆಸ್ಟೆಂಟ್ ಗಳಾಗಿ ಮಾಡಿದರೆ ಆಗುವ ಹಾನಿಯೇನು? ಪ್ರೊಟೆಸ್ಟೆಂಟ್ ಮತ್ತು ಕ್ಯಾಥೋಲಿಕ್ ಎರಡೂ ಒಂದೇ ಸಿಗರೇಟಿನ ಎರೆಡು ಬ್ರಾಂಡ್ ಗಳಿದ್ದಂತೆ. ಅದೇ ಪೇಪರ್, ಅದೇ ತಂಬಾಕು, ತಯಾರಕನೂ ಒಬ್ಬನೇ ಹೆಸರುಗಳು ಬೇರೆ ಅಷ್ಟೇ!
ಕೆಲವೇ ದಿನಗಳ ಹಿಂದೆ ಪಾರ್ಲಿಮೆಂಟಿನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆಯಾಯಿತು. ಅದರ ಉದ್ದೇಶ ಹೀಗಿತ್ತು: ಯಾರೊಬ್ಬರಿಗೂ ಒಬ್ಬ ವ್ಯಕ್ತಿಯನ್ನು ಒಂದು ಧರ್ಮ ಅಥವಾ ಮತಕ್ಕೆ ಮತಾಂತರವಾಗುವಂತೆ ಬಲವಂತಪಡಿಸಕೂಡದು ಎಂದು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮದರ್ ತೆರೆಸಾ ಪ್ರೈಮ್ ಮಿನಿಸ್ಟರ್ ಗೆ ಪತ್ರ ಬರೆದು ವಿರೋಧಿಸಿದರು. ಕ್ರಿಶ್ಚಿಯನ್ ಓಟುಗಳ ಹಿಂದೆ ಬಿದ್ದಿದ್ದ ರಾಜಕಾರಣಿಗಳು ಆಕೆಯ ಪತ್ರವನ್ನು ಮನ್ನಿಸಿ ಧಾರ್ಮಿಕ ಸ್ವಾತಂತ್ರ್ಯದ ವಿಷಯ ಕೈಬಿಟ್ಟರು.
ಮದರ್ ತೆರೆಸಾ ನಿಜವಾಗಿಯೂ ಮತಾಂತರ ಮಾನಸಿಕ ವಿಕಾಸವನ್ನು ತಡೆಯುತ್ತದೆ ಎಂದು ನಂಬಿದ್ದರೆ ಆಕೆ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿರಬೇಕಿತ್ತು. ಒಬ್ಬ ವ್ಯಕ್ತಿಯನ್ನು ಬಲವಂತದಿಂದ ಮತಾಂತರಿಸುವುದಕ್ಕೆ ವಿರೋಧಪಡಿಸಬೇಕಿತ್ತು. ಮದರ್ ತೆರೆಸಾ ಶುದ್ದ ಕಪಟಿಆಕೆ ಹೇಳುವುದು ಒಂದು ಮಾಡುವುದು ಒಂದು ಎಂದು ಇದರಿಂದ ತಿಳಿಯುತ್ತದೆ.
ನಾನು ಕಪಟಿ, ವಂಚಕಿ, ಸೋಗುಗಾರ್ತಿ ಎಂದಿದ್ದಕ್ಕೆ ಪ್ರತಿಕ್ರಿಯಿಸಿರುವ ಮದರ್ ತೆರೆಸಾ, ನಾನು ನಿಮ್ಮನ್ನು ಅಪಾರ ಪ್ರೀತಿಯಿಂದ ಕ್ಷಮಿಸಿದ್ದೇನೆ ಎಂದಿದ್ದಾರೆ. ಪ್ರೀತಿಯಿದ್ದಲ್ಲಿ ಕ್ಷಮಿಸಬೇಕಾಗಿ ಬರುವುದಿಲ್ಲ, ಕೋಪವಿದ್ದರಷ್ಟೇ ಕ್ಷಮೆಯಿರುವುದು. ಕೋಪವನ್ನು ಮೀರಲೆಂದೇ ನಾನು ಧ್ಯಾನ ಮಾಡಬೇಕೆನ್ನುವುದು. ನಾನು ಮದರ್ ತೆರೆಸಾಳನ್ನು ಕ್ಷಮಿಸುವುದಿಲ್ಲ ಏಕೆಂದರೆ ನಾನು ಆಕೆಯ ಬಗ್ಗೆ ಕೋಪಗೊಂಡಿಲ್ಲ.


ಇಷ್ಠಕ್ಕೂ ನಾನು ಯಾವ ಪಾಪ ಮಾಡಿದ್ದೇನೆಂದು ಆಕೆ ನನ್ನನ್ನು ಕ್ಷಮಿಸಬೇಕು? ಎಲ್ಲವೂ ಕ್ಯಾಥೋಲಿಕ್ಕರ ಮೂರ್ಖತನ. ಅವರು ಎಲ್ಲರನ್ನೂ ಎಲ್ಲವನ್ನು ಕ್ಷಮಿಸುತ್ತಾ ತಿರುಗುತ್ತಾರೆ. ಮದರ್ ತೆರೆಸಾರನ್ನು ಕಪಟಿ ವಂಚಕಿ ಸೋಗುಗಾತಿ ಎಂದು ಕರೆದದ್ದಕ್ಕೆ ನನಗೆ ಚೂರೂ ಪಶ್ಚಾತ್ತಾಪವಿಲ್ಲ ಹಾಗೂ ಮುಂದುವರೆದು ನಾನು ಆಕೆಯನ್ನು ಮೂರ್ಖಳು, ಮಧ್ಯವರ್ತಿ ಹಾಗೂ ತಿಳಿಗೇಡಿಯೆಂದೂ ಕರೆಯಲು ಇಚ್ಚಿಸುತ್ತೇನೆ. ಮತ್ತು ಅಪಾರ ಪ್ರೀತಿಯಿಂದ ನನ್ನನ್ನು ಕ್ಷಮಿಸಿದ ಆಕೆಗೆ ಸ್ಪಷ್ಠವಾಗಿ ತಿಳಿಯಪಡಿಸುವುದೇನೆಂದರೆ ಕ್ಷಮಿಸಬೇಕಾಗಿರುವುದು ಆಕೆಯನ್ನು ಮತ್ತು ಆಕೆಯಂತಹ ಮಿಶನರಿಗಳನ್ನಲ್ಲದೇ ನನ್ನನ್ನಲ್ಲ. ಏಕೆಂದರೆ ಆಕೆ ಮತ್ತು ಇತರ ಮಿಶನರಿಗಳು ಕ್ಷಮಿಸಲಾರದಂತಹ ಪಾಪವನ್ನು ಮಾಡುತ್ತಿರುವರು.
ಗರ್ಭಪಾತವೆಂಬ ಪಾಪದ ವಿರುದ್ದ ನಾನು ದತ್ತು ತೆಗೆದುಕೊಳ್ಳುವುದರ ಮೂಲಕ ಹೋರಾಡುತ್ತೇನೆ ಎಂದಿದ್ದಾರೆ. ಗರ್ಭಪಾತವು ಪಾಪವಲ್ಲವೇ ಅಲ್ಲ. ಅದೂ ಭಾರತದಂತಹ ಅತಿ ಜನಸಂಖ್ಯೆಯ ರಾಷ್ಟ್ರದಲ್ಲಿ ಅದೊಂದು ಪವಿತ್ರ ಕೆಲಸ. ಒಂದು ವೇಳೆ ಗರ್ಭಪಾತವು ಪಾಪವೆಂದಾದರೆ ಅದಕ್ಕೆ ಕಾರಣ ಪೋಲಾಕ್ ಪೋಪ್, ಮದರ್ ತೆರೆಸಾ ಮತ್ತು ಸಂಗಡಿಗರು. ಏಕೆಂದರೆ ಇವರು ಮತ್ತು ಇವರ ಸಂಘವು ಗರ್ಭನಿರೋಧಕಗಳಿಗೆ ವಿರೋಧ ಒಡ್ಡುತ್ತದೆ. ಅತಿ ಜನಸಂಖ್ಯೆಯಿಂದ ತುಂಬಿ ತುಳುಕುತ್ತಿರುವ ಪ್ರಪಂಚದಲ್ಲಿ ಗರ್ಭನಿರೋಧಕವು ಆಧುನಿಕ ವಿಜ್ಞಾನದ ವರವಾಗಿದೆ ಮತ್ತು ಇದನ್ನು ತಪ್ಪು ಎಂದು ಹೇಳುವವರು ಕ್ಷಮಿಸಲು ಅನರ್ಹವಾದ ಅಪರಾಧ ಮಾಡುತ್ತಿದ್ದಾರೆ. ಜನಸಂಖ್ಯೆ ಕಡಿಮೆಯಾಗಿ ಜನರೆಲ್ಲಾ ನೆಮ್ಮದಿಯಿಂದ ಬಾಳುವಂತಾದರೆ, ಭೂಮಿಯ ಮೇಲೆ ಸ್ವರ್ಗ ಉಂಟಾಗಲಿದೆ, ಹಾಗದಲ್ಲಿ ಮದರ್ ತೆರೆಸಾರ ಮತ್ತು ಮಿಶನರಿ ಆಫ್ ಚಾರಿಟಿಗಳಿಗೆ ಬಡವರು ಅನಾಥರು ಇಲ್ಲದಂತಾಗಿ ಅವರು ಸ್ವರ್ಗದ ದಾರಿಯನ್ನು ತೋರುವುದಾದರು ಯಾರಿಗೆ? ನಿಜ ಹೇಳಬೇಕೆಂದರೆ ಗರ್ಭಪಾತಗ ಮತ್ತು ಗರ್ಭ ನಿರೋಧಕಗಳನ್ನು ವಿರೋಧಿಸುವ ಜನರೇ ಅನಾಥರ ಸೃಷ್ಠಿಗೆ ಕಾರಣ. ಇವರೇ ಅನಾಥರನ್ನು ಸೃಷ್ಟಿಸುತ್ತಾರೆ ನಂತರ ಅವರ ಸೇವೆ ಮಾಡುತ್ತಾರೆ. ಆಹಾ! ಎಂಥ ಸುಂದರ ಕೆಲಸ ಇವರದು.
ನಾನು ಇಬ್ಬರು ಸಹೋದರರ ಬಗ್ಗೆ ಕೇಳಿದ್ದೆ. ಇಬ್ಬರಲ್ಲಿ ಒಬ್ಬ ದಿನವೂ ರಾತ್ರಿ ಹಳ್ಳಿಯ ಮನೆಗಳ ಮುಂದೆಲ್ಲಾ ಸಾಕಷ್ಟು ಕಸ ಹರಡಿ ಬರುತ್ತಿದ್ದ. ಮಾರನೆಯ ಬೆಳಿಗ್ಗೆ ಇನ್ನೊಬ್ಬ ಸಹೋದರನು ತಾನು ಕಸ ತೆಗೆದು ಶುಚಿ ಮಾಡಿಕೊಡುವುದಾಗಿ ಹಳ್ಳಿಯ ಬೀದಿಗಳಲ್ಲಿ ಕೂಗುತ್ತಾ ಸಾಗುತ್ತಿದ್ದ. ಮನೆಯ ಮುಂದೆ ಆಗಲೇ ಸಾಕಷ್ಟು ಕಸ ಇರುತ್ತದಾದ್ದರಿಂದ ಜನ ಶುಚಿ ಮಾಡಿಸಲು ಮುಗಿಬೀಳುತ್ತಿದ್ದರು. ಒಬ್ಬನು ಇಲ್ಲಿ ಕೆಲಸ ಮುಗಿಸುವಷ್ಟರಲ್ಲೇ ಇನ್ನೊಬ್ಬ ಸಹೋದರ ಮತ್ತೊಂದು ಹಳ್ಳಿಯಲ್ಲಿ ಕಸ ಚೆಲ್ಲಿರುತ್ತಿದ್ದ ಹೀಗೆ ಅವರಿಬ್ಬರೂ ಸಾಕಷ್ಟು ಹಣ ಮಾಡುತ್ತಿದ್ದರು.
ಮದರ್ ತೆರೆಸಾ ಮತ್ತು ಆಕೆಯ ಸಂಗಡಿಗರು ಮಾಡುತ್ತಿರುವುದೂ ಇದನ್ನೇ! ಗರ್ಭನಿರೋಧಕವನ್ನು ವಿರೋಧಿಸುವುದು, ಗರ್ಭಪಾತವನ್ನು ವಿರೋಧಿಸುವುದು, ಜನಸಂಖ್ಯೆ ನಿಯಂತ್ರಣದ ಎಲ್ಲ ಸೂತ್ರಗಳನ್ನೂ ವಿರೋಧಿಸುವುದು ಆಗ ಬಡವರ ದೀನರ ಅನಾಥರ ಸಂಖ್ಯೆ ತಂತಾನೆ ಹೆಚ್ಚುತ್ತದೆ. ಇವರು ಅವರಿಗೆ ಸೇವೆ ಮಾಡುತ್ತಾರೆ! ಸೇವೆಯಿಂದ ಸ್ವರ್ಗ ಸಿಗುತ್ತದೆ! ಬಡವರು ಅನಾಥರು ಸ್ವರ್ಗದ ದಾರಿಗೆ ಮೆಟ್ಟಿಲುಗಳು!
ನಾನು ಬಡತನವನ್ನು ನಾಶ ಮಾಡಲು ಬಯಸುತ್ತೇನೆಯೆ ವಿನಹ ಬಡವರ ಸೇವೆ ಮಾಡಲು ತಯಾರಿಲ್ಲ. ಎಲ್ಲರೂ ಸಾಕಷ್ಟು ಮಾಡಿಯಾಯಿತು. ೧೦೦೦೦ ವರ್ಷದಿಂದ ಬಡವರ ಸೇವೆ ನಡೆಯುತ್ತಲೇ ಇದೆ. ಆದರೆ ಬಡತನ ಇನ್ನೂ ಹೋಗಿಲ್ಲ. ನಮ್ಮಲ್ಲೀಗ ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನದಿಂದ ಬಡತನವನ್ನು ನಾಶ ಮಾಡಲು ಸಾಧ್ಯ. ಮದರ್ ತೆರೆಸಾ ಒಬ್ಬ ಮೂರ್ಖ ಸಂಪ್ರಯದಾಯವಾದಿಯಲ್ಲದೇ ಮತ್ತೇನು ಅಲ್ಲ. ನಾನಿಷ್ಟು ಹೊತ್ತು ಆಕೆಯನ್ನು ಮದರ್ ಎಂದು ಕರೆದೆ. ಇನ್ನು ಮುಂದೆ ಹಾಗೆ ಕರೆಯುವುದನ್ನು ನಿಲ್ಲಿಸಬೇಕೆಂದಿದ್ದೇನೆ. ಆಕೆ ನನ್ನನ್ನು ಡಿಯರ್ ಮಿಸ್ಟರ್ ರಜನೀಶ್ ಎಂದಿದ್ದಾಳೆ ನಾನು ಆಕೆಯನ್ನು ಗೌರವಯುತವಾಗಿ ಡಿಯರ್ ಮಿಸ್ ತೆರೆಸಾ ಎನ್ನಬೇಕೆಂದಿದ್ದೇನೆ!